ಗೃಹಲಕ್ಷ್ಮಿ 15 ನೇ ಕಂತಿನ ಹಣ ಮಹಿಳೆಯರ ಖಾತೆಗೆ ಜಮಾ..!
ಸಮಸ್ತ ಕರ್ನಾಟಕದ ಜನತೆಗೆ ನಮಸ್ಕಾರಗಳು..!
ಕರ್ನಾಟಕದ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿಯ 15ನೇ ಕಂತಿನ ಹಣ ಜಮಾ ಆಗಿದ್ದು ನಿಮ್ಮ ಖಾತೆಗೆ ಜಮಾ ಆಗಿದೆಯಾ ಇಲ್ಲವೇ ಎಂದು ಖಚಿತಪಡಿಸಿಕೊಳ್ಳುವುದು ಹೇಗೆ ಅಷ್ಟೇ ಅಲ್ಲದೆ ಗೃಹಲಕ್ಷ್ಮಿ ಹಣ ನಿಮ್ಮ ಖಾತೆಗೆ ಜಮಾ ಆಗಲಿ ಇದ್ದರೆ ಏನು ಮಾಡಬೇಕು ಹಾಗೆ ಇನ್ನಿತರ ಸುದ್ದಿಗಳಿಗಾಗಿ ಹೊಸ ಹೊಸ ಮಾಹಿತಿಗಳಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ ಹಾಗೆ ನಮ್ಮ ಲೇಖನಗಳ ಮೂಲಕ ಹೊಸ ಮಾಹಿತಿಯನ್ನು ಪಡೆದುಕೊಳ್ಳಿ..!
ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಯೋಜನೆಯ 15ನೇ ಕಂತಿನ ಹಣ ಜಮಾ..!
ರಾಜ್ಯ ಸರ್ಕಾರದ ಹೊಸ ಯೋಜನೆ ಇದಾಗಿದ್ದು ಇಲ್ಲಿಯವರೆಗೂ 14ನೇ ಕಂತಿನ ವರೆಗೂ ಹಣ ಮಹಿಳೆಯರ ಖಾತೆಗೆ ಜಮಾ ಆಗಿದ್ದು ಇದೀಗ ಕಳೆದ ಎರಡು ದಿನಗಳಲ್ಲಿ ಮಹಿಳೆಯರ ಖಾತೆಗೆ 15ನೇ ಕಂತಿನ ಹಣ ಜಮಾ ಆಗಿದೆ.. ಅಂದರೆ ಪ್ರತೀ ಪ್ರತಿಕಂತು ತಲ ಎರಡು ಸಾವಿರದಂತೆ 15ನೇ ಕಂತಿನ ವರೆಗೂ 30,000 ಹಣ ಮಹಿಳೆಯರ ಖಾತೆಗೆ ಜಮಾ ಆಗಿದೆ..!

ರಾಜ್ಯ ಸರ್ಕಾರದ ಈ ಯೋಜನೆಯಿಂದ ಮಹಿಳೆಯರ ಖಾತೆಗೆ ಹಣ ಜಮಾ ಆಗಿದ್ದು ಇದೀಗ 15ನೇ ಕಂತಿನ ಹಣ ಕೂಡ ಬಿಡುಗಡೆಯಾಗಿದೆ.
ನಿಮ್ಮ ಖಾತೆಗೆ ಹಣ ಜಮಾ ಆಗಿದೆಯಾ ಅಥವಾ ಆಗಿಲ್ಲವೇ ಎಂದು ನಿಮ್ಮ ಮೊಬೈಲ್ ನಲ್ಲಿ ಸ್ಟೇಟಸ್ ಚೆಕ್ ಮಾಡಿಕೊಳ್ಳುವುದು ಹೇಗೆ..?
ಹೌದು ಸ್ನೇಹಿತರೆ ಪ್ರಸ್ತುತ ದಿನದಲ್ಲಿ ಆಂಡ್ರಾಯ್ಡ್ ಮೊಬೈಲ್ ಮುಖಾಂತರ ನಿಮ್ಮ ಗೃಹಲಕ್ಷ್ಮಿ ಯೋಜನೆಯ ಸ್ಟೇಟಸ್ ಅನ್ನು ನೀವೇ ನಿಮ್ಮ ಮೊಬೈಲ್ ನಲ್ಲಿ ಕೇವಲ ಎರಡು ನಿಮಿಷದಲ್ಲಿ ಚೆಕ್ ಮಾಡಿಕೊಳ್ಳಬಹುದಾಗಿದೆ..
ಹೌದು ಸ್ನೇಹಿತರೆ DBT App ಮುಖಾಂತರ ಲಾಗಿನ್ ಆಗಿ ನಿಮ್ಮ ಗೃಹಲಕ್ಷ್ಮಿಯ ಯೋಜನೆಯ ಎಷ್ಟು ಕಂತಿನ ಹಣ ನಿಮ್ಮ ಖಾತೆಗೆ ಜಮಾ ಆಗಿದೆ ಹಾಗೆಯೇ ಯಾವ ದಿನಾಂಕದಂದು ನೇಮಕಾತಿಗೆ ಜಮಾ ಆಗಿದೆ ಎಂಬ ಸಂಪೂರ್ಣ ವಿವರಣೆಯನ್ನು ಕೇವಲ ನಿಮ್ಮ ಮೊಬೈಲ್ ನಲ್ಲಿಯೇ ನೀವು ಪಡೆದುಕೊಳ್ಳಬಹುದಾಗಿದೆ.
ನಿಮ್ಮ ಖಾತೆಗೆ ಹಣ ಜಮಾ ಆಗಿದೆಯಾ ಅಥವಾ ಆಗಿಲ್ಲವೇ ಎಂದು ಚೆಕ್ ಮಾಡಿಕೊಳ್ಳುವುದು ಹೇಗೆ..?
ಈ ಮೇಲ್ಕಾಣಿಸಿದ ಬಟನ್ ಮೇಲೆ ಕ್ಲಿಕ್ ಮಾಡಿ ಪ್ಲೇ ಸ್ಟೋರ್ ಆಪ್ ಮುಖಾಂತರ ನೀವು DBT ಆಪ್ ಒಂದನ್ನು ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ.
ನಂತರ ಅಲ್ಲಿ ಕೇಳಿದಂತೆ ನಿಮ್ಮ ಆಧಾರ್ ಕಾರ್ಡ್ ಮುಖಾಂತರ ಲಾಗಿನ್ ಆಗಬೇಕು. ಲಾಗಿನ್ ಆಗಬೇಕೆಂದರೆ ಅಲ್ಲಿ ಕೇಳಿರುವ ಮಾಹಿತಿಯನ್ನು ಸಂಪೂರ್ಣವಾಗಿ ನೀಡಿದಾಗ ಮಾತ್ರ ನೀವು ಲಾಗಿನ್ ಆಗಲು ಅರ್ಹತೆಯನ್ನು ಪಡೆದಿರುತ್ತೀರಿ.
ಲಾಗಿನ್ ಆದ ನಂತರ ನಿಮ್ಮ ಸ್ಟೇಟಸ್ ನೀವು ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳಿ.
ಗೃಹಲಕ್ಷ್ಮಿ ಯೋಜನೆಯ ಮಹತ್ವ..!
ಕಳೆದ ವರ್ಷದಲ್ಲಿ ಎಲೆಕ್ಷನ್ ಸಮಯದಲ್ಲಿ ಕಾಂಗ್ರೆಸ್ ಪಕ್ಷವು ಚುನಾವಣೆಯಲ್ಲಿ ಬಹುಮತದಿಂದ ಆಯ್ಕೆಗೊಂಡರೆ ನಾವು ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತರುತ್ತೇವೆ ಎಂದು ಆಶ್ವಾಸನೆಯನ್ನು ನೀಡಿತ್ತು.
ಅದರಂತೆ ಬಹು ಮತದಿಂದ ಆಯ್ಕೆಗೊಂಡ ಕಾಂಗ್ರೆಸ್ ಸರ್ಕಾರವು ಆಡಳಿತಕ್ಕೆ ಬರುತ್ತಿದ್ದಂತೆ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿತು. ಮಾತು ಕೊಟ್ಟಂತೆ ಕಾಂಗ್ರೆಸ್ ಸರ್ಕಾರವು ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಯೋಜನೆ ಮುಖಾಂತರ ಪ್ರತಿ ಕಂತಿನಲ್ಲಿ 2000 ಹಣವನ್ನು ವರ್ಗಾವಣೆ ಮಾಡುತ್ತದೆ.
ಹೌದು ಸ್ನೇಹಿತರೆ, ಇಲ್ಲಿಯವರೆಗೂ 15ನೇ ಕಂತಿನಾದವರೆಗೂ ಹಣ ಬಿಡುಗಡೆಯಾಗಿದ್ದು ಇನ್ನೂ ಮುಂದಿನ ತಿಂಗಳು ಅಂದರೆ ಜನವರಿ 2025ರಲ್ಲಿ 16ನೇ ಕಂತಿನ ನಾವು ಕೂಡ ಬಿಡುಗಡೆಯಾಗಲಿದೆ.
ಇಲ್ಲಿವರೆಗೂ ಒಟ್ಟು 15 ಕಾಂತಿನ ಹಣ ಬಿಡುಗಡೆಯಾಗಿದ್ದು ಅಂದರೆ ಒಟ್ಟು ಮೊತ್ತ ಮೂವತ್ತು ಸಾವಿರ ರೂಪಾಯಿ ಆಗಿದ್ದು ಇದರಿಂದ ಮಹಿಳೆಯರಿಗೆ ಆರ್ಥಿಕವಾಗಿ ಸಹಾಯವಾಗಿದೆ.
ಪ್ರಸ್ತುತ ದಿನಗಳಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ದಿನ ದಿನ ಹೊಸ ಯೋಜನೆಗಳನ್ನು ತರುತ್ತಿದ್ದು ಅದರಲ್ಲಿ ಗೃಹಲಕ್ಷ್ಮಿ ಯೋಜನೆಯ ಒಂದು ಉತ್ತಮ ಯೋಜನೆ ಎಂದು ಈಗಾಗಲೇ ತಿಳಿದು ಬಂದಿದ್ದು ಕುಟುಂಬಗಳಿಗೆ ಆರ್ಥಿಕವಾಗಿ ಸಹಾಯ ಮಾಡುವ ಈ ಯೋಜನೆಯ ಉದ್ದೇಶವು ಸಫಲಗೊಂಡಿದೆ.
ರಾಜ್ಯ ಸರ್ಕಾರದ ಈ ಒಂದು ಯೋಜನೆಯಿಂದ ಕುಟುಂಬಗಳಿಗೆ ಅತ್ಯಂತ ಲಾಭದಾಯಕವಾಗಿದ್ದು ಇದರಿಂದ ಮಹಿಳೆಯರಿಗೆ ತಮ್ಮ ಸಂಸಾರವನ್ನು ನಡೆಸಿಕೊಂಡು ಅಂದರೆ ನಿಭಾಯಿಸಿಕೊಂಡು ಹೋಗುವಲ್ಲಿ ಸಹಾಯವಾಗಿದೆ. ಬಡ ಕುಟುಂಬಗಳಿಗೆ ಈ ಗೃಹಲಕ್ಷ್ಮಿ ಯೋಜನೆಯ ಹಣವೇ ಆಧಾರವಾಗಿದ್ದು ಇದರಿಂದ ಎಷ್ಟೋ ಕುಟುಂಬಗಳಿಗೆ ಆರ್ಥಿಕವಾಗಿ ಬಲವನ್ನು ರಾಜ್ಯ ಸರ್ಕಾರವು ನೀಡಿದೆ.
ಪ್ರತ್ಯಕ್ಷವಾಗಿ ಪರೋಕ್ಷವಾಗಿ ಇಂತಹ ಹತ್ತು ಹಲವಾರು ಯೋಜನೆಗಳನ್ನು ರಾಜ್ಯ ಸರ್ಕಾರವು ಬಿಡುಗಡೆ ಮಾಡುತ್ತಿದ್ದು ಕಳೆದ ವರ್ಷಗಳಲ್ಲಿ ಪಂಚ ಯೋಜನೆಗಳನ್ನು ರಾಜ್ಯ ಸರ್ಕಾರವು ಬಿಡುಗಡೆ ಮಾಡಿದ್ದು ಅದರಲ್ಲಿ ಉಚಿತ ಬಸ್ ಪ್ರಯಾಣ ಕೂಡ ಒಂದು.
ಹೀಗೆ ರಾಜ್ಯ ಸರ್ಕಾರವು ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳಿಗೆ ಸಹಾಯ ವಾಗಲೆಂದು ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದ್ದು ಅದರಲ್ಲಿ ಗೃಹಲಕ್ಷ್ಮಿ ಯೋಜನೆಯು ಒಂದು ಉದ್ದೇಶಪೂರ್ವಕವಾಗಿ ಒಂದು ಉತ್ತಮ ಆರ್ಥಿಕ ಸಬಲತೆಯನ್ನು ಕುಟುಂಬಗಳಿಗೆ ನೀಡಲು ಬಿಡುಗಡೆಯಾಗಿದ್ದು ಇದೊಂದು ಉತ್ತಮವಾದಂತಹ ಯೋಜನೆ ಎಂದು ಕರೆದರೆ ತಪ್ಪಾಗಲಾರದು.
ನಿಮ್ಮ ಖಾತೆಗೆ ಗೃಹಲಕ್ಷ್ಮಿ ಯೋಜನೆ ಹಣ ಜಮಾ ಆಗಿಲ್ಲವೆಂದರೆ ಏನು ಮಾಡಬೇಕು..?
ಪ್ರೀತಿಯ ಸ್ನೇಹಿತರೆ ನಿಮ್ಮ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಿಲ್ಲವೆಂದರೆ ಮೊದಲು ನಿಮ್ಮ ಬಿಪಿಎಲ್ ಕಾರ್ಡ್ ಸ್ಟೇಟಸ್ ಅನ್ನು ಚೆಕ್ ಮಾಡಿಸಿಕೊಳ್ಳುವುದು ಉತ್ತಮ.
ಅಷ್ಟೇ ಅಲ್ಲದೆ ಒಂದು ಬಾರಿ ಬ್ಯಾಂಕಿಗೆ ಭೇಟಿ ನೀಡಿ ನಿಮ್ಮ ಈ ಕೆವೈಸಿ ಸಂಪೂರ್ಣವಾಗಿ ಆಗಿದೆಯೇ ಅಥವಾ ಇಲ್ಲವೋ ಎಂದು ಖಚಿತಪಡಿಸಿಕೊಳ್ಳುವುದು ಉತ್ತಮವಾಗಿದೆ.
ಈ ಕೆ ವೈ ಸಿ ಆಗದೆ ಇದ್ದಲ್ಲಿ ನಿಮ್ಮ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗುವುದಿಲ್ಲ. ಅದಕ್ಕಾಗಿ ನೀವು ಮೊದಲು ಬ್ಯಾಂಕಿಗೆ ಭೇಟಿ ನೀಡಿ ನಿಮ್ಮ ಈ ಕೆ ವೈ ಸಿ ಸಂಪೂರ್ಣಗೊಳಿಸಿಕೊಳ್ಳಿ.
ತದನಂತರ ಮತ್ತೊಮ್ಮೆ ಅಪ್ಲಿಕೇಶನ್ ಹಾಕುವ ಮೂಲಕ ನೀವು ಈ ಗೃಹಲಕ್ಷ್ಮಿ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.
ಇಲ್ಲಿವರೆಗೂ ಕೆಲ ಮಹಿಳೆಯರ ಖಾತೆಗೆ ಅರ್ಧ ಕಂತಿನ ಹಣ ಜಮಾ ಆಗಿದ್ದು ಇನ್ನುಳಿದ ಕಂತೆನ ಹಣ ಜಮಾ ಆಗಿಲ್ಲ ನೀವು ಕೂಡ ಒಂದು ಬಾರಿ ಬ್ಯಾಂಕಿಗೆ ಭೇಟಿ ನೀಡಿ ನಿಮ್ಮ kyc ಸಂಪೂರ್ಣ ಆಗಿದಿಯಾ ಅಥವಾ ಇಲ್ಲವೋ ಎಂದು ಪರೀಕ್ಷಿಸಿಕೊಳ್ಳುವುದು ಉತ್ತಮ. ಅಷ್ಟೇ ಅಲ್ಲದೆ ಒಂದು ಬಾರಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಭೇಟಿ ನೀಡಿ ನಿಮ್ಮ ಈ ತೊಂದರೆಯನ್ನು ಅಲ್ಲಿ ಅವರಿಗೆ ವಿವರಣೆಯನ್ನು ನೀಡಿದರೆ ಅವರು ನಿಮ್ಮ ಸ್ಟೇಟಸ್ ಚೆಕ್ ಮಾಡುವ ಮೂಲಕ ನಿಮಗೆ ಸಹಾಯವನ್ನು ಮಾಡುತ್ತಾರೆ.
ಹೌದು ಸ್ನೇಹಿತರೆ, ಹಲವು ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಯೋಜನೆ ಹಣ ಜಮಾ ಆಗಲೇ ಇರಲು ಈ ಮೇಲ್ಕಾಣಿಸಿದ ಕಾರಣಗಳು ಇರುತ್ತವೆ ಅದಕ್ಕಾಗಿ ಈ ಮೇಲ್ಕಾಣಿಸಿದ ಕಾರಣಗಳನ್ನು ತಿಳಿದುಕೊಂಡು ನಿಮ್ಮ ಸ್ಟೇಟಸ್ ಚೆಕ್ ಮಾಡಿಕೊಳ್ಳುವುದು ಉತ್ತಮವಾಗಿದೆ.
ಹಾಗೆ ಇನ್ನಿತರ ಹೊಸ ಹೊಸ ಯೋಜನೆಗಳ ಬಗ್ಗೆ ತಿಳಿದುಕೊಳ್ಳಲು ನಮ್ಮ ವಾಟ್ಸಪ್ ಗ್ರೂಪ್ ಅನ್ನು ಜಾಯಿನ್ ಆಗಿ ಹಾಗೆ ಇನ್ನಿತರ ಸಮಸ್ಯೆಗಳಿದ್ದರೆ ವಾಟ್ಸಪ್ ಮುಖಾಂತರ ನಾವು ನಮ್ಮನ್ನು ಸಂಪರ್ಕಿಸಿ ನಿಮ್ಮ ಸಮಸ್ಯೆಗೆ ಉತ್ತರವನ್ನು ಪಡೆದುಕೊಳ್ಳಬಹುದು.
ಒಟ್ಟಿನಲ್ಲಿ ಹೇಳುವುದಾದರೆ ಗೃಹಲಕ್ಷ್ಮಿ ಯೋಜನೆಯ ಒಂದು ಉತ್ತರವಾದಂತಹ ಯೋಜನೆ ಇದಾಗಿದ್ದು ಇದರ ಲಾಭವನ್ನು ಪಡೆದುಕೊಳ್ಳಿ ಹಾಗೆ ನಿಮ್ಮ ಖಾತೆಗೆ ಹಣ ಜಮಾ ಆಗದೆ ಇದ್ದಲ್ಲಿ ಈ ಮೇಲ್ಕಾಣಿಸಿದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ.